ಬೇಸಿಗೆ ಬಂತೆಂದರೆ ಆ ಕಾಲಕ್ಕೆ ಸೂಕ್ತವಾದ ಆಹಾರಶೈಲಿ ಅಳವಡಿಸಿಕೊಳ್ಳುವುದರಿಂದ ದೇಹದ ಉಷ್ಣತೆ ಕಾಪಾಡಿ ಆರೋಗ್ಯವನ್ನು ವೃದ್ಧಿಸಬಹುದು. ಬೇಸಿಗೆಯಲ್ಲಿ ನೀರು ಬಾಯಾರಿಕೆ ಹೆಚ್ಚಾಗಿರುವುದರಿಂದ ಜ್ಯೂಸ್ ಕುಡಿಯಲು ಬಯಸುತ್ತೇವೆ. ಬಾಯಾರಿಕೆ ಕಡಿಮೆ ಮಾಡಲು ಕಾರ್ಬೋಹೈಡ್ರೇಟ್ ಜ್ಯೂಸ್ ಕುಡಿಯುವುದಕ್ಕಿಂತ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಜ್ಯೂಸ್ ಮಾಡಿ ಕುಡಿದರೆ ಬಾಯಿಗೂ ರುಚಿ, ಆರೋಗ್ಯವೂ ಹೆಚ್ಚು. ಬೇಸಿಗೆಯಲ್ಲಿ ಕುಡಿಯಲು ಸೂಕ್ತವಾದ ಪಾನೀಯಗಳಲ್ಲೊಂದು ದಾಸವಾಳದ ಪಾನೀಯ. ಈ ಪಾನೀಯ ಮಾಡಿಟ್ಟರೆ 2 ತಿಂಗಳು ಬಳಸಬಹುದು. ಇನ್ನು ಸಾಮಾನ್ಯವಾಗಿ ದಾಸವಾಳ ಹೂ ಎಲ್ಲರ ಮನೆ ಮುಂದೆ ಇರುತ್ತದೆ. ಬನ್ನಿ ಇದನ್ನು ಬಳಸಿ ಆರೋಗ್ಯಕರ ಜ್ಯೂಸ್ ತಯಾರಿಸುವುದು ಹೇಗೆ ಹಾಗೂ ಇದರಿಂದ ದೊರೆಯುವ ಆರೋಗ್ಯಕರ ಪ್ರಯೋಜನಗಳೇನು ಎಂದು ನೋಡೋಣ: